ಶ್ರೀನಿವಾಸ ಗೌಡ ಅವರು ಕರ್ನಾಟಕದ ಮೂಡಬಿದ್ರಿಯ ಭಾರತೀಯ ಕಂಬಳದ ಜಾಕಿಯಾಗಿದ್ದಾರೆ. ಅವರನ್ನು ಇಂಡಿಯನ್ ಉಸೇನ್ ಬೋಲ್ಟ್ ಎಂದೂ ಕರೆಯುತ್ತಾರೆ. ಗೌಡರವರ ಕಂಬಳದ ಸ್ಪ್ರಿಂಟ್ ನೊರು ಮೀಟರ್ನಲ್ಲಿ ಉಸೇನ್ ಬೋಲ್ಟ್ರವರ ವಿಶ್ವ ದಾಖಲೆಯನ್ನು ಮುರಿದ ನಂತರ ಬೆಳಕಿಗೆ ಬಂದರು. ಗೌಡರವರು ತಮ್ಮ ರೇಸಿಂಗ್ ಎಮ್ಮೆಯೊಂದಿಗೆ ೧೩.೬೨ ಸೆಕೆಂಡುಗಳಲ್ಲಿ ೧೪೨.೫ ಮೀಟರ್ ಓಡಿದರು. == ಗುರುತಿಸುವಿಕೆ == ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಭಾರತೀಯ ಕ್ರೀಡಾ ಪ್ರಾಧಿಕಾರದ ಪರವಾಗಿ ಗೌಡರಿಗೆ ಟ್ರಯಲ್ಸ್ ವ್ಯವಸ್ಥೆ ಮಾಡಲು ಮುಂದಾದರು. ಸಾಯ್ () ತರಬೇತುದಾರರಿಂದ ಗೌಡರಿಗೆ ತರಬೇತಿ ನೀಡುವ ವ್ಯವಸ್ಥೆ ಮಾಡುವುದಾಗಿ ಸಚಿವರು ಸಹ ಭರವಸೆ ನೀಡಿದರು. ಇವರಿಗೆ ಕರ್ನಾಟಕ ಮುಖ್ಯಮಂತ್ರಿಯು ಕೂಡ 3 ಲಕ್ಷ ರೂಪಾಯಿ ಚೆಕ್ ನೀಡಿದರು. ಆದಾಗ್ಯೂ, ಗೌಡರು ಭಾರತೀಯ ಕ್ರೀಡಾ ಪ್ರಾಧಿಕಾರದ ಪ್ರಯೋಗಗಳಿಗೆ ಹೋಗಲು ನಿರಾಕರಿಸಿದರು ಏಕೆಂದರೆ ಕಂಬಳವು ಆನ್-ಟ್ರ್ಯಾಕ್ ಸ್ಪ್ರಿಂಟ್‌ಗಿಂತ ಸಂಪೂರ್ಣವಾಗಿ ವಿಭಿನ್ನ ಕ್ರೀಡೆಯಾಗಿದೆ. == ನಂತರದ ಪರಿಣಾಮ == ಕಂಬಳ ಸೀಸನ್ ಮುಗಿದ ನಂತರವೇ ಸಾಯಿಯಲ್ಲಿ ತರಬೇತಿ ಆರಂಭಿಸುವುದಾಗಿ ಗೌಡರು ತಿಳಿಸಿದ್ದರು. == ಉಲ್ಲೇಖಗಳು ==